ಕಾವ್ಯಯಾನ

ಅಪ್ಪ ಅಪ್ಪ ಎಂದರೆ ನನ್ನಾಸರೆಯ ಹೆಗಲು ಕಡುಗಪ್ಪಿನಂತಹ ಮುಗಿಲು ಬಯ್ಬಿರಿದ ಭೂಮಿಗೆ ಸುರಿವ ಮಳೆಯ ಹನಿಯ ಮುತ್ತಿನ ಸಾಲು ಅಪ್ಪ ಎಂದರೆ ಪ್ರೀತಿಯ ಹೊನಲು ಸವಿಜೇನಿಗೆ ಬೆರೆತ ಹಾಲು ಮಗಳ ಕಾಯುವ ಒಡಲು ಜೊತೆಗಿದ್ದರೆ ಜಗದಲಿ ನನ್ನ ಕೈಯೇ ಮೇಲು ಅಪ್ಪ ಎಂದರೆ ನಗುವ ದ್ವನಿಯ ಕೊರಳು ಸದಾ ಜೊತೆಗಿರುವ ನೆರಳು ಹಿಡಿದು ಹೊರಟರೆ ಅಪ್ಪನ ಕಿರುಬೆರಳು ಖುಷಿಯ ಬುಗ್ಗೆಯಲಿ ಮೆರವಣಿಗೆ ಹಗಲಿರುಳು ಅಪ್ಪನಿಲ್ಲದಾ ಈ ಕ್ಷಣವು ಹೃದಯದಲವಿತಿದೆ ನಿರಾಸೆಯು ಯಾರಲ್ಲಿ ಹುಡುಕಲಿ ಅಪ್ಪನೊಲವು ಅಪ್ಪನ ಕಳೆದುಕೊಂಡ … Continue reading ಕಾವ್ಯಯಾನ